ಚಡಪಡಿಕೆ...!
ಹೌದು, ಅದು ಒಂದು ರೀತಿಯ ಚಡಪಡಿಕೆಯೇ ಸರಿ. ನಿಜವಾಗಿಯೂ ನನ್ನ ಮನಸ್ಸು ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತಿತ್ತು. ಸುಮಾರು ಎರಡು ಗಂಟೆಯ ಹಿಂದೆ ಇದ್ದ ತಾಳ್ಮೆಯಾಗಲಿ ಅಥವಾ ಉತ್ಸಾಹವಾಗಲಿ ನನ್ನಲ್ಲೀಗ ಎಳ್ಳಷ್ಟೂ ಉಳಿದಿರಲಿಲ್ಲ. ಕಾಯುವಿಕೆ ತಾಳ್ಮೆಯ ಸೀಮೆಯನ್ನು ಉಲ್ಲಂಘಿಸಿತ್ತು. ಇನ್ನು ಮುಂದೆ ಒಂದು ಕ್ಷಣ ಕೂಡ ಕಾಯುವುದು ನನ್ನಿಂದ ಸಾಧ್ಯವಿರಲಿಲ್ಲ.
ನನ್ನ ಮೇಲೆಯೇ ನನಗೆ ಒಂದು ರೀತಿಯ ಜಿಗುಪ್ಸೆ ಉಂಟಾಗತೊಡಗಿತು. ಇದೇನು ಮೊದಲನೇ ಸಲವಾಗಿರಲಿಲ್ಲ. ಈ ಹಿಂದೆ ಕೂಡ ಹಲವಾರು ಸಲ ಅವಳಿಗೋಸ್ಕರ ನಾನು ಕಾದದ್ದಿದೆ. ಒಮ್ಮೆಯೂ ಅವಳು ಹೇಳಿದ ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಆದರೆ ನಾನು ಮಾತ್ರ ಪ್ರತಿಸಲವೂ ನಿಗಧಿತ ಸಮಯಕ್ಕೆ ಮುಂಚಿತವಾಗಿಯೇ ಬಂದಿರುತ್ತಿದ್ದೆ. ಸಮಯ ಪರಿಪಾಲನೆ ನನಗಷ್ಟೇ ಸೀಮಿತವಾಗಿದೆಯಾ ? ನಮ್ಮಿಬ್ಬರ ನಡುವಿನ ಪ್ರೀತಿಯ ಜವಾಬ್ದಾರಿಯಲ್ಲಿ ಅವಳದು ಯಾವ ಪಾಲೂ ಇಲ್ವಾ ?
ಅವಳು ತಡವಾಗಿ ಬಂದಾಗಲೆಲ್ಲ ಒಂದಲ್ಲ ಒಂದು ಸಬೂಬು ಹೇಳುತ್ತಿದ್ದಳು. ಆ ಸಬೂಬನ್ನು ನಾನು ನಂಬುತ್ತೇನೋ ಇಲ್ಲವೊ ಎಂಬುದು ಅವಳಿಗೆ ಬೇಕಾದಂತೆಯೂ ತೋರುತ್ತಿರಲಿಲ್ಲ. ಇತ್ತೀಚಿಗೆ ಅವಳು ನನ್ನನ್ನು ಬೇಕೆಂದೇ ಕಾಯುವಂತೆ ಮಾಡುತ್ತಿದ್ದಾಳೆಂದು ಭಾಸವಾಗತೊಡಗಿದೆ.
ಕುಳಿತಿದ್ದ ಬಂಡೆಗಲ್ಲಿನ ಮೇಲೆ ಎದ್ದು ನಿಂತೆ. ಆದರೆ..... ಆದರೆ ಈ ಜಾಗವನ್ನು ಬಿಟ್ಟು ಜಗತ್ತಿನ ಯಾವ ಮೂಲೆಗೆ ಹೋಗಬೇಕೊ ನನಗರ್ಥವಾಗಲಿಲ್ಲ. ಇನ್ನು ಅವಳು ಬರುವುದಿಲ್ಲ ಎಂಬುದು ಖಚಿತವಾಗಿತ್ತಾದರೂ ನನ್ನ ಮನಸ್ಸು ಮನೆಗೆ ಹೋಗಲು ಹಿಂಜರಿಯುತ್ತಿತ್ತು. ಈ ಕ್ಷಣಕ್ಕೆ, ಈ ಜಗತ್ತಿನಲ್ಲಿ ನಾನೊಬ್ಬ ಒಬ್ಬಂಟಿ ಎಂಬ ಭಾವ ಮನಸ್ಸನಾವರಿಸಿತು.
ಒಮ್ಮೆಯಂತು ನನ್ನೆದುರಿಗಿನ ಆಳವಾದ ಕಣಿವೆಯಲ್ಲಿ ಹಾರಬೇಕೆಂಬ ಬಯಕೆ ಮನಸ್ಸಿನಲ್ಲಿ ಸುಳಿಯಿತು. ಕಣಿವೆಯ ತಳ ಮುಟ್ಟಿದಾಗಾಗುವ ಅವಸ್ಥೆಯ ಬಗ್ಗೆ ನೆನೆದು ನನ್ನ ದೇಹ ಲಘುವಾಗಿ ಕಂಪಿಸಿತು. ಮುಖ ತಂಗಾಳಿಯಲ್ಲೂ ಬೇವರಿತು. ಕಾಲುಗಳೆರಡು ನಡುಗಿದವು. ಒಂದೆರಡು ಕ್ಷಣಗಳ ನಂತರ ನನ್ನ ಈ ಹುಚ್ಚು ಯೋಚನೆಗಳನ್ನು ನೆನೆದು ನನಗೇ ನಗು ಬಂತು. ಗಾಯಗೊಂಡ ಹಾವಿಗೆ ಇರುವೆಗಳು ಮೆತ್ತುವಂತೆ, ಘಾಸಿಗೊಂಡ ಮನಸ್ಸಿಗೆ ಈ ರೀತಿಯ ಯೋಚನೆಗಳು ಮುತ್ತುತ್ತವೇನೋ...?
ಸೂರ್ಯ ಒಂದು ಎತ್ತರವಾದ ಪರ್ವತದ ಹಿಂದೆ ಅರ್ಧ ಮುಳಗಿದ್ದ. ನನಗದೇಕೋ ಈ ದಿನ ಸೂರ್ಯ ತನ್ನ ನಿಗಧಿತ ವೇಳೆಗೂ ಮುಂಚೆಯೇ ಮುಳುಗುವುದಕ್ಕಾಗಿ ಅವಸರಿಸುತ್ತಿದ್ದಾನೇನೊ ಎಂದೆನ್ನಿಸಿತು. ರಿಸ್ಟ್ ವಾಚ್ ನಲ್ಲಿ ಸಮಯ ನೋಡಿಕೊಂಡೆ. ಆರು ಗಂಟೆಯಾಗಿ ಹದಿನೈದು ನಿಮಿಷವಾಗಿತ್ತು. ಹಕ್ಕಿಗಳು ಚಿಲಿಪಿಲಿ ಕಲರವದೊಂದಿಗೆ ತಮ್ಮ ಗೂಡು ಸೇರಲು ಅಣಿಯಾಗುತ್ತಿದ್ದವು.
ಒಲ್ಲದ ಮನಿಸ್ಸಿನಿಂದಲೆ ಬಂಡೆಗಲ್ಲಿನ ಮೇಲಿನಿಂದ ಹಿಂದೆ ತಿರುಗಿ ಕೆಳಗಡೆ ಇಳಿದು, ದೂರದಲ್ಲಿ ಇದ್ದ ನನ್ನ ಸೈಕಲ್ ಕಡೆಗೆ ನಡೆದುಕೊಂಡು ಹೊರಟೆ. ನಾಲ್ಕು ಹೆಜ್ಜೆ ಇಡುವಷ್ಟರಲ್ಲಿಯೇ ಒಂದು ಚಿಟ್ಟೆ ನನ್ನನ್ನು ಆಕರ್ಷಿಸಿತು. ಪ್ರಕೃತಿಯ ಸೌಂದರ್ಯವನ್ನು ಜೀವಂತವಾಗಿಸಲು ಆ ದೇವರು ಚಿಟ್ಟೆಯನ್ನು ಸೃಷ್ಟಿಸಿದನೇನೋ. ಆ ಚಿಟ್ಟೆ ಅದ್ಯಾವ ಪ್ರಜಾತಿಗೆ ಸೇರಿದ್ದಾಗಿತ್ತೋ ನನಗೆ ಗೊತ್ತಾಗಲಿಲ್ಲ. ಸ್ವಾಲೋಟೈಲ್ ಪ್ರಜಾತಿಯದ್ದಾಗಿರಬಹುದು ಅಥವಾ ಅಪೋಲೋ ಪ್ರಜಾತಿಯದ್ದಾಗಿದ್ದರೂ ಆಶ್ಚರ್ಯವಿಲ್ಲ. ಅದೇನೇ ಇರಲಿ, ನೋಡುವುದಕ್ಕೆ ಮಾತ್ರ ಅದು ತುಂಬ- ತುಂಬ ಮನೋಹರವಾಗಿತ್ತು. ಅದರ ಹಳದಿ ಪಂಖಗಳ ಕಪ್ಪು, ಕೆಂಪು ಮತ್ತು ಬಿಳಿ ವರ್ಣದ ಕಲೆಗಳು ಅದಕ್ಕೆ ಒಂದು ವಿಶೇಷ ಮೇರಗನ್ನು ಕೊಟ್ಟಿದ್ದವು. ಅದು ಒಂದು ಗುಲಾಬಿ ಹೂವಿನ ಮೇಲೆ ಕುಳಿತಿತ್ತು. ಆಗಾಗ ಅದು ತನ್ನ ಪಂಖಗಳನ್ನು ಬಡಿಯುತ್ತಿದ್ದು, ಹೂವಿನ ಮಕರಂದ ಹೀರುತ್ತಿದ್ದ ಅದರ ತನ್ಮಯತೆ ಕಂಡು ನಾನು ಬೆರಗಾದೆ.
ನಾನು ಆ ಚಿಟ್ಟೆಯನ್ನು ಕಾಣುವುದಕ್ಕೂ ಮುಂಚೆ ಗುಲಾಬಿ ಹೂವಿನ ಮೇಲೆ ಕುಳಿತು ಮಕರಂದ ಹೀರುತ್ತಿರುವುದು ಅದೆಷ್ಟು ಹೊತ್ತಾಗಿತ್ತೋ. ಅದೇಕೋ ನನ್ನ ಮನಸ್ಸು ಅದರ ಮೇಲಿನಿಂದ ನನ್ನ ದೃಷ್ಟಿಯನ್ನು ತೆಗೆದು ಮುಂದಕ್ಕೆ ಹೆಜ್ಜೆ ಇಡಲು ಒಪ್ಪಲಿಲ್ಲ. ಒಂದು ಕ್ಷಣ ಅದನ್ನು ಮುಟ್ಟಬೇಕು, ಅದನ್ನು ಹಿಡಿಯಬೇಕೆಂಬ ಯೋಚನೆ ಮೂಡಿತು. ಆದರೆ ಅದನ್ನು ಮುತ್ತುವುದರಿಂದ ಅದಕ್ಕೆ ಎಲ್ಲಿ ಹಾನಿಯಾಗುವುದೋ ಎಂಬ ಭಯ ಉಂಟಾಗಿ ಸುಮ್ಮನೆ ನೋಡುತ್ತಾ ನಿಂತೆ.
ಕೆಲವು ಕ್ಷಣಗಳ ನಂತರ ಆ ಚಿಟ್ಟೆ ಗುಲಾಬಿ ಹೂವಿನ ಮೇಲಿನಿಂದ ಹಾರಿದಾಗ ಅದು ಎಲ್ಲಿಗೆ ಹೋಗಬಹುದೆಂಬ ಸಹಜ ಕುತೂಹಲದಿಂದಾಗಿ ನನ್ನ ದೃಷ್ಟಿ ಅದನ್ನು ಬೆನ್ನಟ್ಟಿತು. ಹಾರುತ್ತಾ- ಹಾರುತ್ತಾ ಹೋಗಿ ಅದು ಅಲ್ಲಿಯೇ ಸಮೀಪವಿದ್ದ ಮತ್ತೊಂದು ಹುಲಾಬಿ ಹೂವಿನ ಮೇಲೆ ಕುಳಿತುಕೊಂಡಿತು. ಇದನ್ನು ಕಂಡು ನನಗೆ ಆಶ್ಚರ್ಯವಾಯಿತು. ಮೊದಲಿನ ಗುಲಾಬಿ ಹೂವಿನಲ್ಲಿದ್ದ ಮಕರಂದವೆಲ್ಲ ಮುಗಿದು ಹೋಯಿತೇ ? ಅಥವಾ ಒಂದೇ ಹೂವಿನ ಮೇಲೆ ಬಹಳ ಹೊತ್ತು ಕೂಡದಿರುವುದು ಚಿಟ್ಟೆಯ ನೈಸರ್ಗಿಕ ಸ್ವಭಾವವೇ ?
ಮತ್ತೆ ಕೆಲವು ಕ್ಷಣಗಳ ನಂತರ ಆ ಚಿಟ್ಟೆ ಮತ್ತೊಂದು ಹೂವಿಗೆ ಹಾರಿತು. ನಾನು ಅದನ್ನೇ ನೋಡುತ್ತಾ ಮುಂದೆ ಹೆಜ್ಜೆ ಹಾಕಿದೆ. ಸೈಕಲ್ ಬಳಿ ಬಂದು, ಅದರ ಮೇಲೆ ಕುಳಿತುಕೊಂಡು ಇನ್ನೇನು ಅಲ್ಲಿಂದ ಚಲಿಸಬೇಕು ಎನ್ನುವಷ್ಟರಲ್ಲಿಯೇ ಎದುರಿನಿಂದ ಒಂದು ಕಾರು ಬರುತ್ತಿರುವುದು ಕಾಣಿಸಿತು. ಒಮ್ಮೆಯೂ ಕೂಡ ನಾನಿಲ್ಲಿ ಯಾವ ಒಂದು ಕಾರನ್ನು ಕಂಡಿರಲಿಲ್ಲ. ಆ ನೀಲಿ ಬಣ್ಣದ ಕಾರನ್ನು ಕಂಡು ನನಗೆ ಆಶ್ಚರ್ಯದ ಜೊತೆಗೆ ಅದರಲ್ಲಿ ಯಾರಿರಬಹುದೆಂದು ತಿಳಿಯುವ ಕುತೂಹಲವೂ ಉಂಟಾಯಿತು.
ಆ ಕಾರು ನೇರವಾಗಿ ನನ್ನ ಬಳಿಯೇ ಬಂದು ನಿಂತಾಗ ನನಗೆ ಮತ್ತಷ್ಟು ಆಶ್ಚರ್ಯವಾಯಿತು. ಕಾರಿನ ಒಂದು ಬಾಗಿಲು ತೆರೆಯಿತು. ತೆರೆದ ಬಾಗಿಲಿನಿಂದ ಇಳಿದ ವ್ಯಕ್ತಿಯನ್ನು ಕಂಡು ನನ್ನ ಆಶ್ಚರ್ಯಕ್ಕೆ ಸೀಮೆಯೇ ಇಲ್ಲದಾಯಿತು. ಕಾರಿನಿಂದ ಇಳದದ್ದು ಅವಳು...!
ಹೌದು ಅವಳೇ, ಅವಳಿಗೊಸ್ಕರವೇ ನಾನು ಇಷ್ಟೊತ್ತು ಕಾದದ್ದು. ಅವಳು ಕೊನೆಗೂ ಬಂದಿದ್ದಳು.
ಆದರೆ...!?

(ಭಾಗ 2ನ್ನು ಓದಿ)

No comments:
Post a Comment