ದೃಶ್ಯ – ೩
ಕಂಪೌಂಡರ್ :- “ನೋಡಪ್ಪ, ನಿಮ್ಮಗುಂದು ರಿಪೊರ್ಟ ಬಂದಾದ. ಅದರ ಪ್ರಕಾರ ನಿಮ್ಮಗನ ಹೊಟ್ಟೆಯಲ್ಲಿ ಗಡ್ಡೆ ಆಗ್ಯಾದ. ಅದನ್ನು ತೆಗಿಬೇಕಂದ್ರ ದೊಡ್ಡ ಆಪರೇಶನ್ ಮಾಡಬೇಕು. ಇಲ್ಲಾಂದ್ರ ನಿಮ್ಮಗ ಉಳಿಯೋದು ಖಂಡಿತ ಸಾಧ್ಯವಿಲ್ಲ.”
ರಂಗಣ್ಣ :- “ಏನ್… ಏನ್ ಹೇಳ್ತಾ ಇದ್ದೀರಾ ನೀವು ? ನ…. ನಮ್ಮ ಕೂಸಿನ್ ಹೊಟ್ಯಾಗ್ ಗಡ್ಡಿ ಆಗ್ಯಾದೇನು ?”
ಕಂಪೌಂಡರ್ :- “ಹ್ಞೂಂ, ಹೌದು. ಈಗ್ಗೇ ಆಪರೇಶನ್ ಮಾಡಬೇಕು. ಆಪರೇಶನ್ ಖರ್ಚು ಹತ್ತು ಸಾವಿರ ಆಗುತ್ತೆ.”
ರಂಗಣ್ಣ :- “ಹತ್ತು ಸಾವಿರ ! ಅಷ್ಟೊಂಜ್ದು ಹಣಾನ ? ನಮ್ಮ ಹತ್ರ ಹಣ ಎಲ್ಲಿಂದ ಬರಬೇಕ್ರಿ ? ನಾವು ತುಂಬಾ ಬಡೂರು.”
ಕಂಪೌಂಡರ್ :- “ಇವತ್ತು ಹಣ ಇಲ್ಲಾಂದ್ರೆ ನಾಳೆ ನಿಮ್ಮಗುಂದು ಹೆಣ ನೋಡಬೇಕಾಗುತ್ತೆ ಹುಷಾರ್.”
ಶಾಂತಮ್ಮ :- “ಅಯ್ಯೋ, ಹಂಗನ್ನಬ್ಯಾಡ್ರಿ. ನನ್ನ ಕತ್ತನ್ಯಾಗಿಂದು ತಾಳಿ ಮಾರಿಯಾದ್ರೂ ಹಣ ತರ್ತೀನಿ. ನಮ್ಮಗೀನ ಉಳಿಸಿ ಕೊಡ್ರಿ.” ( ಗೊಗರಿಯುವ ಧ್ವನಿಯಲ್ಲಿ ನುಡಿದಳು.)
ಕಂಪೌಂಡರ್ :- “ ಸರಿ ಹಂಗಾರ, ನೀಚು ಹೋಗಿ ಹಣ ತೊಗೊಂಬರ್ರಿ. ನಾವಿಲ್ಲಿ ಆಪರೇಶನ್‍ಗೆ ವ್ಯವಸ್ಥೆ ಮಾಡ್ತೀವಿ.” (ಎಂದು ನುಡಿದು ಕಂಪೌಂಡರ್ ಒಳಗಡೆ ಡಾಕ್ಟರ್ ಹತ್ತಿರ ಹೋಗುತ್ತಾನೆ).
ಕಂಪೌಂಡರ್ :- “ಡಾಕ್ಟ್ರೇ, ನಾ ಹೇಳಿದಂತೆ ಅವರು ಆಪರೇಶನ್‍ಗೆ ಒಪ್ಪಿಕೊಂಡಿದ್ದಾರೆ. ಆಪರೇಶನ್‍ಗಾಗಿ ಆರು ಸಾವಿರ ಕೊಡುವುದಕ್ಕೆ ಒಪ್ಪಿಸಿದ್ದೀನಿ.”
ಡಾಕ್ಟರ್ :- “ಏನು ? ಕೇವಲ ಆರು ಸಾವಿರಾನಾ ?”
ಕಂಪೌಂಡರ್ :- “ಡಾಕ್ಟ್ರೇ ಅತಿ ಆಸೆ ಒಳ್ಳೇದಲ್ಲ. ಕಿಡ್ನಿ ತೆಗೆದುಕೊಂಡು ಮಾರಿದಾಗ ಬರೋ ಹಣವೇನು ಕಡಿಮೆ ಅಲ್ಲವಲ್ಲ.”
ಡಾಕ್ಟರ್ :- “ ಸರಿ, ಸರಿ” (ಎಂದು ನುಡಿದು, ಜೋರಾಗಿ) “ಸಿಸ್ಟರ್, ಸಿಸ್ಟರ್” (ಕೂಗುತ್ತಾನೆ. ಸಿಸ್ಟರ್ ಒಬ್ಬಳು ಓಡಿ ಬರುತ್ತಾಳೆ.)
ಸಿಸ್ಟರ್ :- “ಎಸ್ ಸರ್…!”
ಡಾಕ್ಟರ್ :- “ನೋಡು, ಆಪರೇಶನ್ ಮಾಡೋದಿದೆ. ಎಲ್ಲಾ ಪ್ರಿಪೇರ್ ಮಾಡಿಡು.”
ಸಿಸ್ಟರ್ :- “ಓ.ಕೆ ಸರ್.”
No comments:
Post a Comment